About Us

Home > About Us

Master Tractors ಚಾಮರಾಜನಗರ

Captain Tractors ಅಧಿಕೃತ ಡೀಲರ್‌ಶಿಪ್

Captain Tractors ಚಾಮರಾಜನಗರ ಜಿಲ್ಲೆಯಲ್ಲಿ 2025ರ ಫೆಬ್ರವರಿ ತಿಂಗಳಲ್ಲಿ ಆರಂಭವಾಗಿದ್ದು, ಇದರ ಪ್ರೊಪ್ರೈಟರ್ ಜವಾಬ್ದಾರಿಯನ್ನು ಸಂಪೂರ್ಣವಾಗಿ ಕೆ.ಎನ್. ಪಣಿರಾಜಮೂರ್ತಿ ಕುದೇರಿ ಅವರು ವಹಿಸಿಕೊಂಡಿದ್ದಾರೆ.

ಪಣಿರಾಜಮೂರ್ತಿ ಅವರು ತಮ್ಮ MCA ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿ, ಆರಂಭದಲ್ಲಿ ಸಾಫ್ಟ್ವೇರ್ ಕಂಪನಿಯಲ್ಲಿ ಕೆಲಸ ನಿರ್ವಹಿಸಿದ್ದರು. ನಂತರ ಆ ಉದ್ಯೋಗವನ್ನು ತೊರೆದು ಸಂಪೂರ್ಣವಾಗಿ ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡರು.

ಇದರ ಜೊತೆಗೆ ಅವರು ವಿವಿಧ ಕ್ಷೇತ್ರಗಳಲ್ಲಿ ಅನುಭವವನ್ನು ಪಡೆದುಕೊಂಡಿದ್ದಾರೆ. ಚಾಮರಾಜನಗರ ಮಿಲ್ಕ್ ಯೂನಿಯನ್ನಲ್ಲಿ ಎರಡು ವರ್ಷಗಳ ಕಾಲ Extension Officer ಆಗಿ ಸೇವೆ ಸಲ್ಲಿಸಿದ್ದು, ನಂತರ ಕುದೇರಿಯಲ್ಲಿ "ಮಾಸ್ಟರ್ ಆಗ್ರೋ" ಎಂಬ ಔಷಧಿ ಮತ್ತು ಗೊಬ್ಬರದ ಅಂಗಡಿಯನ್ನು ಆರಂಭಿಸಿದರು.

Captain Tractors ದೇಶದಲ್ಲೇ ಪ್ರಪ್ರಥಮವಾಗಿ ಮಿನಿ ಟ್ರ್ಯಾಕ್ಟರ್ಗಳನ್ನು ಪರಿಚಯಿಸಿದ ವಿಶೇಷ ಕಂಪನಿಯಾಗಿದ್ದು, ರೈತರಿಗೆ ಅನುಕೂಲಕರವಾದ ಆಧುನಿಕ ಯಂತ್ರೋಪಕರಣಗಳನ್ನು ಒದಗಿಸುತ್ತಿದೆ.

ಈ ಟ್ರ್ಯಾಕ್ಟರ್ ಚಾಮರಾಜನಗರ ಜಿಲ್ಲೆಗೆ ಬಂದ ಹಿನ್ನೆಲೆಯೂ ವಿಶೇಷವಾಗಿದೆ. ಪಣಿರಾಜಮೂರ್ತಿ ಅವರು ಕೊಯಮತ್ತೂರಿನಲ್ಲಿ ನಡೆದ Agri Expo ಪ್ರದರ್ಶನಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಮೊದಲ ಬಾರಿಗೆ Captain Tractors ಟ್ರ್ಯಾಕ್ಟರ್ ಅನ್ನು ಗಮನಿಸಿದರು.

80+

Countries

175+

Dealers

1,00,000+

Tractors Cultivating

600+

Employees

Unveiling the Past, Shaping the Future

Tough Roads Lead to Beautiful Destination

Master Tractors Facility
Tractor Lineup
Farmer Interaction
Showroom Display

{{ f.title }}

{{ f.desc }}

Our Vision

ನಮ್ಮ ದೃಷ್ಟಿ (Our VISION)

ನವೀನ ಮತ್ತು ಸುಸ್ಥಿರ ಪರಿಹಾರಗಳೊಂದಿಗೆ ಟ್ರ್ಯಾಕ್ಟರ್ ಮತ್ತು ಕೃಷಿ ಯಂತ್ರೋಪಕರಣಗಳ ಉದ್ಯಮದಲ್ಲಿ ಜಾಗತಿಕ ನಾಯಕರಾಗುವುದು ನಮ್ಮ ಪ್ರಮುಖ ಗುರಿಯಾಗಿದೆ. ರೈತರ ಶ್ರಮವನ್ನು ಸುಲಭಗೊಳಿಸಲು ಅತ್ಯಾಧುನಿಕ ತಂತ್ರಜ್ಞಾನವನ್ನು ಕೃಷಿ ಕ್ಷೇತ್ರಕ್ಕೆ ಪರಿಚಯಿಸುವುದು ಮತ್ತು ಪ್ರಗತಿಪರ ಕೃಷಿ ಪದ್ಧತಿಗೆ ಒತ್ತು ನೀಡುವುದು ನಮ್ಮ ಆಶಯವಾಗಿದೆ. ಪರಿಸರ ಸ್ನೇಹಿ ಮತ್ತು ಗರಿಷ್ಠ ಇಂಧನ ದಕ್ಷತೆಯುಳ್ಳ ಉಪಕರಣಗಳ ಮೂಲಕ ಕೃಷಿ ಉತ್ಪಾದಕತೆಯನ್ನು ಹೆಚ್ಚಿಸಲು ನಾವು ನಿರಂತರವಾಗಿ ಶ್ರಮಿಸುತ್ತೇವೆ.

  • ಅತ್ಯಾಧುನಿಕ ತಂತ್ರಜ್ಞಾನ: ಕೃಷಿ ಉತ್ಪಾದಕತೆ ಹೆಚ್ಚಿಸಲು ಸುಧಾರಿತ ತಂತ್ರಜ್ಞಾನದ ಬಳಕೆ.
  • ಪರಿಸರ ಸ್ನೇಹಿ ಕೃಷಿ: ಪರಿಸರ ಕಾಳಜಿಯೊಂದಿಗೆ ಸುಸ್ಥಿರ ಕೃಷಿ ಪದ್ಧತಿಗಳಿಗೆ ಬೆಂಬಲ.
  • ಜಾಗತಿಕ ಗುಣಮಟ್ಟ: ಅಂತರರಾಷ್ಟ್ರೀಯ ಮಟ್ಟದ ಗುಣಮಟ್ಟದ ಮಾನದಂಡಗಳ ಅಳವಡಿಕೆ.
Our Vision
Our Mission - Field Work
Our Mission - Tractor Assembly
Our Mission

ನಮ್ಮ ಧ್ಯೇಯೋದ್ದೇಶ (Our MISSION)

ಕೃಷಿಯಲ್ಲಿ ಕ್ರಾಂತಿಗಾಗಿ, ಕೃಷಿ ಯಾಂತ್ರೀಕರಣದ ವಿವಿಧ ಪರಿಹಾರಗಳ ಮೂಲಕ ಪ್ರತಿಯೊಬ್ಬ ರೈತರನ್ನು ತಲುಪಿ, ಅವರ ಜೀವನವನ್ನು ಮುನ್ನಡೆಸುವುದು ನಮ್ಮ ಕರ್ತವ್ಯವಾಗಿದೆ. ಪ್ರತಿ ಹಂತದಲ್ಲೂ ರೈತರಿಗೆ ಗುಣಮಟ್ಟದ ಸೇವೆ, ವಿಶ್ವಾಸಾರ್ಹ ಬಿಡಿಭಾಗಗಳು ಮತ್ತು ತಾಂತ್ರಿಕ ಮಾರ್ಗದರ್ಶನವನ್ನು ಒದಗಿಸುವ ಮೂಲಕ ಗ್ರಾಮೀಣ ಆರ್ಥಿಕತೆಯನ್ನು ಬಲಪಡಿಸುವುದು. ಕೃಷಿ ಸವಾಲುಗಳಿಗೆ ತಕ್ಕ ಮಿನಿ ಟ್ರ್ಯಾಕ್ಟರ್ ಹಾಗೂ ಸುಧಾರಿತ ಯಂತ್ರೋಪಕರಣಗಳನ್ನು ರೈತರಿಗೆ ಕೈಗೆಟುಕುವ ದರದಲ್ಲಿ ತಲುಪಿಸುವುದು ನಮ್ಮ ಮುಖ್ಯ ಧ್ಯೇಯವಾಗಿದೆ.

  • ಕೈಗೆಟುಕುವ ಬೆಲೆ: ಸಣ್ಣ ಮತ್ತು ಮಧ್ಯಮ ರೈತರಿಗೂ ಕೈಗೆಟುಕುವ ದರದಲ್ಲಿ ಟ್ರ್ಯಾಕ್ಟರ್‌ಗಳು.
  • ತ್ವರಿತ ಗ್ರಾಹಕ ಸೇವೆ: 24/7 ತಾಂತ್ರಿಕ ಬೆಂಬಲ ಮತ್ತು ವಿಶ್ವಾಸಾರ್ಹ ಬಿಡಿಭಾಗಗಳ ಸರಬರಾಜು.
  • ನಿರಂತರ ಆವಿಷ್ಕಾರ: ರೈತರ ಅಗತ್ಯಕ್ಕೆ ತಕ್ಕಂತೆ ಹೊಸ ಕೃಷಿ ಉಪಕರಣಗಳ ಸಂಶೋಧನೆ.
CAPTAIN

Ready to Experience the Captain Difference?

Explore our range of tractors and implements built for modern farming

Tractors

Implements

Tractor Implements Gallery Videos Contact
Master Tractors

Welcome

Experience the power and versatility of Captain Tractors in Chamarajanagar.

Master Tractors

Chamarajanagar

Call Now

Get a Free Callback!

Leave your number and our experts will contact you shortly.